ಬಾಂಬೆಯಲ್ಲಿ ಹಲವಾರು ಕಡೆ ಕೇಳಿ ಬಂದ ಉದ್ಘಾರ ಇದು - ಒಮ್ಮೊಮ್ಮೆ ನಮ್ಮ ಕಡೆಯಿಂದ, ಮಗದೊಮ್ಮೆ ನಾವು ಕಂಡ ಕನ್ನಡಿಗರಿಂದ...
ಇದಕ್ಕೆ ಕಾರಣವಾದದ್ದು ಭಾನುವಾರದ ಊರು ಸುತ್ತಾಟ.
ಸಂಕ್ರಾಂತಿ ಪ್ರಯುಕ್ತ(ಅಂತ ಅಂದುಕೊಳ್ಳೋಣ ಬಿಡಿ) ತುಂಬಾ ದಿನಗಳ ನಂತರ ಬಾಂಬೆ ಸುತ್ತಿದೆ - ಮೂವರು ಐಐಟಿ ಗೆಳೆಯರು(ಅವರಲ್ಲಿ ಇಬ್ಬರು ಕನ್ನಡಿಗರು), ಮತ್ತಿಬ್ಬರು ಗೆಳೆಯನ ಗೆಳೆಯರ ಜೊತೆ !!
ಮೊದಲು ಕಾಲಿಟ್ಟಿದ್ದು ಬಾಂಬೆಯಲ್ಲಿ ಪ್ರಸಿದ್ಧವಾದ ಉಡಿಪಿ ಭೋಜನಾಲಯಕ್ಕೆ - ನಮ್ಮ ಕಡೆಯ ಊಟ ಮಾಡಿ ಪ್ರಯಾಣಕ್ಕೆ ನಾಂದಿ ಹೇಳಿದಂತೆ. ಅಲ್ಲಿ ಪೊಂಗಲ್ ಕೂಡ ಸಿಕ್ಕಿತು - ವಿಶೇಷವಾಗಿ ಕಬ್ಬಿಣ ತುಣುಕುಗಳ ಸಹಿತ !
ಆದರೂ ಕೂಡ ನಮ್ಮಲಿ ಇದ್ದಂತೆ ಸ್ವಾದ ಹಾಗು ಆತ್ಮೀಯತೆ ಆ ಭೋಜನಾಲಯದಲ್ಲಿ ಕಂಡು ಬರಲಿಲ್ಲ !
ನಂತರ ಎಲಿಫೆಂಟಾ ಗುಹೆಗಳ ಕಡೆಗೆ ಹೊರಟಿತು ನಮ್ಮ ದಂಡು - ಮೊತ್ತಮೊದಲ ಬಾರಿಗೆ ಸಮುದ್ರದಲ್ಲಿ ದೋಣಿ ಪ್ರಯಾಣ ಅಧ್ಬುತವಾಗಿತ್ತು ..
ಸುತ್ತಮುತ್ತ ಬರೀ ಸಮುದ್ರದ ನೀರು, ಹಾಗು ಬೃಹದಾಕಾರದ ಹಡಗುಗಳು ನೋಡಲು ಒಂದು ರೀತಿ ರೋಮಾಂಚನ - ಸಮುದ್ರದ ಹಾಗು ಓಲಾಡುವ ದೋಣಿಯ ಬಗ್ಗೆ ಭಯವಿಲ್ಲದಿದ್ದರೆ!
ಅಲ್ಲಿ ಕೂಡ ನಮಗೆ ಇಬ್ಬರು ಕನ್ನಡಿಗರು ಸಿಕ್ಕರೂ - ಭಾನುವಾರದ ಮಜಾ ಸವಿಯಲು ಅವರು ಕೂಡ ಅಲ್ಲಿಗೆ ಬಂದಿದ್ದರು..
ನನ್ನ ಸ್ನೇಹಿತನ ಪ್ರಥಮ ಪ್ರತಿಕ್ರಿಯೆ - "ಒಹ್ ! ಕನ್ನಡ"
ಆ ನಂತರ ಸಾಯಂಕಾಲ ಬಾಂದ್ರಾ ಕಡೆಗೆ ಹೊರಟೆವು - ಸಮುದ್ರದ ಮೇಲೆ ಕಟ್ಟಿರುವ ಸಂಪರ್ಕ ಸೇತುವೆ 'ವೊರ್ಲಿ-ಬಾಂದ್ರಾ ಸೀ ಲಿಂಕ್' ಹಾದು ಅಲ್ಲಿ ತಲುಪ್ಪಿದ್ದು ಯಾವ ಕಾರಣಕ್ಕೆ ??
ಮನ್ನತ್ - ಶಾಹರುಖ್ ಖಾನ್ ಮನೆಯ ಮುಂದೆ ಹೋಗಿ ಛಾಯಾಚಿತ್ರ ತೆಗೆಸಿಕೊಳ್ಳಲು!!
ಅಲ್ಲಿ ಕೂಡ ಮಾರ್ಗಮಧ್ಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಕನ್ನಡಿಗರು ಕ್ಯಾಂಟೀನ್ ನಡೆಸುತ್ತಿದ್ದರು - ಅವರ ಜೊತೆ ಕೂಡ ಸ್ವಲ್ಪ ಸಮಯದ ಕಾಲ ಹರಟೆ ನಡೆಯಿತು..
ಎಲ್ಲ ಸುತ್ತಾಟ ಮುಗಿಸಿ ಸುಸ್ತಾದ ಮೇಲೆ ಅಲ್ಲೇ ಬಾಂದ್ರಾ ಸಮೀಪ ಇದ್ದ ಸಾಯಿ ಸಾಗರ್ ಹೋಟೆಲ್ನಲ್ಲಿ ಊಟ ಮಾಡಿದೆವು - ಅದು ಕೂಡ ಸಂಪೂರ್ಣ ಕನ್ನಡಿಗರು ನಡೆಸುವ ಹೋಟೆಲ್ಲೇ !
ಎಲ್ಲ ಮುಗಿಸಿ ಮಧ್ಯರಾತ್ರಿಯ ನಂತರ ವಾಪಸು ರೂಮಿಗೆ ಬಂದಮೇಲೆ ಇದ್ದದ್ದು ಒಂದೇ ಕೆಲಸ - ಮಲಗಿಕೊಂಡು ಸುಖ ನಿದ್ದೆ :-)

No comments:
Post a Comment