Sunday, August 7, 2011

ಕನ್ನಡ ಸಂಜೆ


ಇಂದು IIT ಬಾಂಬೆ ಕನ್ನಡ ಸಂಘದ ವತಿಯಿಂದ ಕನ್ನಡ ಸಂಜೆ ಕಾರ್ಯಕ್ರಮ ನಡೆಯಿತು :-)
ಆದ್ದರಿಂದ ಇವತ್ತಿನ ದಿನಚರಿಯನ್ನು ಆಂಗ್ಲ ಭಾಷೆಯ ಬದಲು ನಮ್ಮ ಕಸ್ತೂರಿ ಕನ್ನಡದಲ್ಲಿ ಬರೆಯುತ್ತಿದ್ದೇನೆ...
ಕನ್ನಡ ಓದಲು ಬರುವವರು ಮುಂದುವರೆಸಿ - ಬರದವರು ನಾಳೆಯವರೆಗೆ ಕಾಯಿರಿ ;-)

ಕಾರ್ಯಕ್ರಮದ ಪ್ರಯುಕ್ತ "ಗಾಳಿಪಟ" ಚಲನಚಿತ್ರ ಪ್ರದರ್ಶಿಸಲಾಯಿತು - ಒಮ್ಮೆ ನೋಡಿದ್ದರೂ ನಮ್ಮವರನ್ನು ಒಟ್ಟಿಗೆ ಕಾಣಲು ನಾನೂ ಅಲ್ಲಿಗೆ ಹೋದೆ.
ಬರಿ ವಿದ್ಯಾರ್ಥಿಗಳಲ್ಲದೆ ಕೆಲವು ಅಧ್ಯಾಪಕರು ಕೂಡ ಬಂದು ಚಲನಚಿತ್ರ ವೀಕ್ಷಣೆ  ಮಾಡುವುದನ್ನು ನೋಡಿ ಸಂತಸ ಹಾಗು ಆಶ್ಚರ್ಯ ಎರಡೂ ಒಟ್ಟಿಗೆ ಆಯಿತು :-)
ಏನೇ ಆಗಲಿ ಒಟ್ಟಿಗೆ ಇಷ್ಟು ಜನ ಕನ್ನಡಿಗರನ್ನು ನನ್ನ ವಿದ್ಯಾಲಯದಲ್ಲಿ ಕಂಡಿದ್ದು ಖುಷಿ ಕೊಡುವಂತಹ ವಿಚಾರವೇ ಸರಿ...

ಸಂಜೆ ಮಾಡಬೇಕಾದ ಕೆಲಸಗಳನ್ನೆಲ್ಲ ಬದಿಗೊತ್ತಿ ಇವತ್ತು ಕನ್ನಡ ಸಂಜೆಯಲ್ಲಿ ಭಾಗವಹಿಸಿದ್ದು ಇವತ್ತಿನ ದಿನಚರಿಯ ಅಧ್ಯಾಯ.
ಈ ಬರಹದಲ್ಲಿ ಏನಾದರೂ ತಪ್ಪುಗಳು ಅಥವಾ ನ್ಯೂನ್ಯತೆಗಳು ಇದ್ದರೆ ದಯವಿಟ್ಟು ನಿರ್ಲಕ್ಷಿಸಬೇಕಾಗಿ ವಿನಂತಿ..
ಇಂತಿ ಸಮಾಪ್ತಿ :-D

ಕೃತಜ್ಞತೆಗಳು: ಗೂಗಲ್ ಲಿಪಿ ಪರಿವರ್ತಕ  
   

No comments:

Post a Comment